ಜೆಂಟೂ ಲಿನಕ್ಸ್( ) ಗಣಕಯಂತ್ರಗಳಿಗಾಗಿರುವ ಒಂದು ಲಿನಕ್ಸ್ ವಿತರಣೆ. ಇದು ಬಳಕೆದಾರರ ಕೆಲಸವನ್ನು ಸಾಧ್ಯವಾದಷ್ಟು ಆಪ್ಯಾಯಮಾನವಾಗಿ ಮತ್ತು ಪರಿಣಾಮಕಾರಿಯಾಗಿ ಮಾಡುವ ತತ್ವಕ್ಕೆ ಬದ್ಧವಾಗಿದೆ. ಪ್ರಾಯೋಗಿಕವಾಗಿ ಇದರ ಅರ್ಥ ಕನಿಷ್ಠ ವಿತರಣೆ-ನಿರ್ದಿಷ್ಟ ಬದಲಾವಣೆಗಳು, ನವೀಕರಣಗಳೊಂದಿಗೆ ಕನಿಷ್ಠ ಒಡೆಯುವಿಕೆ, ಬಳಕೆದಾರ ಸ್ನೇಹಪರತೆ. ಜೆಂಟೂ ಲಿನಕ್ಸ್ ಗಾಗಿಯೇ ಬರೆದಿರುವ "ಪೋರ್ಟ್ಏಜ್"() ಎಂಬ ಪ್ಯಾಕೇಜ್ ಮ್ಯಾನೇಜರನ್ನು ಬಳಸಿ ಹಲವಾರು ಸಾಫ್ಟ್‌ವೇರಗಳನ್ನು ಸ್ಥಾಪಿಸಿ ಬಹುದು, ನವೀಕರಿಸಬಹುದು ಹಾಗು ತೆಗೆಯಬಹುದು. ಜೆಂಟೂ ಲಿನಕ್ಸ್ ರೋಲಿಂಗ್ ಬಿಡುಗಡೆಯನ್ನು ಉಪಯೊಗಿಸುತ್ತದೆ.ಅಂದರೆ ಇದರಲ್ಲಿ ಯಾವುದೇ ಪ್ರಮುಖ ಬಿಡುಗಡೆಗಳು ಇರುವುದಿಲ್ಲ. ನಿಯಮಿತ ಸಿಸ್ಟಮ್ ನವೀಕರಣದಿಂದ ನವೀಕರಿಸಿದ ಅಥವಾ ಹೊಸ ಜೆಂಟೂ ಲಿನಕ್ಸ್ ಸಾಫ್ಟ್‌ವೇರಗಳನ್ನು ಪಡೆಯಬಹುದು. ಜೆಂಟೂ ಲಿನಕ್ಸ್ ಸಮಗ್ರ ದಸ್ತಾವೇಜನ್ನು ಹೊಂದಿದೆ, ಇದರಲ್ಲಿ "ಜೆಂಟೂ ವಿಕಿ" ಎಂದು ಕರೆಯಲ್ಪಡುವ ಸಮುದಾಯ ವಿಕಿ ಒಳಗೊಂಡಿದೆ. == ಉಲ್ಲೇಖಗಳು ==